ಸಿಖ್ ಧರ್ಮದ ಮೂರು ಮುಖ್ಯ ಆಧಾರ ಸ್ತಂಭಗಳನ್ನು ಧರ್ಮಗುರು ಸಂತ ಗುರು ನಾನಕ್ ದೇವ್ ಅವರು ಸೂತ್ರವಾಗಿ ನೀಡಿದ್ದಾರೆ. === ನಾಮ ಜಪ === ಪಂಜಾಬಿ:ನಾಮ್ ಜಪೋ, ಪಂಜಾಬಿ ಗುರುಮುಖಿ: ਨਾਮ ਜਪੋ ದೇವರ ನಾಮ ಸ್ಮರಣೆಯನ್ನು ಎಂದೂ ಮರೆಯದಿರುವುದು. ದೇವರ ಕೃಪೆಗಾಗಿ ನಿತ್ಯವೂ ಸಿಖ್ ಶ್ಲೋಕಗಳಾದ ನಿತ್ನಮ್ ಬನಿ(ಸಿಖ್ಖರ ದಿನ ನಿತ್ಯದ ಶ್ಲೋಕಗಳು)ಗಳನ್ನು ಪಠಿಸುವುದು. === ನಿಯತ್ತಿನ ಜೀವನ === ಪಂಜಾಬಿ:ಕಿರಾತ್ ಕರೋ, ಪಂಜಾಬಿ ಗುರುಮುಖಿ: ਕਿੱਰਤ ਕਰੋ ನಿಯತ್ತಿನಿಂದ ಗಳಿಸುವುದು. ಕಷ್ಟ ಪಟ್ಟು ದುಡಿಯುವುದು. ತಮ್ಮ ಮಾನಸಿಕ ಹಾಗು ದೈಹಿಕ ಶಕ್ತಿಗಳನ್ನು ಯಥಾವತ್ತಾಗಿ ದುಡಿಸಿಕೊಂಡು ಮಾತ್ರವೇ ಸಂಪಾದಿಸುವುದು. ದೇವರು ಕೊಡಮಾಡಿದ ಎಲ್ಲವನ್ನೂ ವರವೆಂದು ಪರಿಗಣಿಸಿ ಸದಾಕಾಲ ಸತ್ಯವನ್ನೇ ನುಡಿಯುತ್ತಾ ಸಭ್ಯರಾಗಿ ಬದುಕುವುದು. ಉತ್ತಮ ನೈತಿಕ ಹಾಗು ಆಧ್ಯಾತ್ಮಿಕ ಮೌಲ್ಯಗಳನ್ನು ರೂಢಿಸಿಕೊಳ್ಳುವುದು. === ಹಂಚಿತಿನ್ನುವುದು === ಪಂಜಾಬಿ:ವಾಂದ್ ಚಕ್ಕೋ, ಪಂಜಾಬಿ ಗುರುಮುಖಿ: ਵੰਡ ਛਕੋ ಆಹಾರ, ಸಂಪತ್ತು, ಧನ ಯಾವುದೇ ಆಗಲಿ ಧರ್ಮ, ಜಾತಿ, ಮತ, ಪಂಗಡಗಳ ಯಾವುದೇ ಭೇದವಿಲ್ಲದೆ ಎಲ್ಲರೊಂದಿಗೂ ಹಂಚಿಕೊಂಡು ಬಾಳುವುದು. ಸಿಖ್ ಧರ್ಮದ ಮೌಲ್ಯಗಳನ್ನು ಎತ್ತಿ ಹಿಡಿಯುವ ಯಾವುದೇ ಸಮುದಾಯದೊಂದಿಗೆ ಗುರುತಿಸಿಕೊಳ್ಳುವುದು ಹಾಗು ತಮ್ಮ ಕೈಲಾದಷ್ಟು ಆ ಸಮುದಾಯಕ್ಕೆ ನೆರವು ನೀಡುವುದು. ಕೊಡುವುದರ ಬಗ್ಗೆ ಶ್ರದ್ಧೆ ಬೆಳೆಸಿಕೊಳ್ಳುವುದು. ಕೊಡುವುದರಿಂದಲೇ ಶ್ರೇಯಸ್ಸು ಎಂಬ ಭಾವ ತಳೆಯುವುದು. == ಆಕರಗಳು == ಸಿಖ್ ನೆಟ್ ಆಂಗ್ಲ ತಾಣ